ಹೆದ್ದಾರಿಗುಂಟ

“ಹೆದ್ದಾರಿಗುಂಟ ರಾತ್ರಿ ಏನೆಲ್ಲ ನಡೆಯಬಹುದೆಂದು
ಹೆದರಿಕೊಂಡೇ ‘ಹಗಲಿನಲ್ಲಿಯೇ ಹೊರಟಿದ್ದೇನೆ’
safe ಆಗಿ ನನ್ನೂರು ತಲುಪಲು”

ಊರಿಂದೂರಿನ ಸರಪಳಿ ರಸ್ತೆಗಳ ಏರಿಳಿತ ನೋಡಲು
ವಿಶಾಲ ವಿಹಂಗಮ ನಿಸರ್ಗಕಾಣಲು
ಅಷ್ಟೇ ಅಲ್ಲ ಅಗಾಗ ತೂಕಡಿಕೆ ಬಂದರೂ
ಸ್ವಲ್ಪ ನೆಮ್ಮದಿಯಾಗಿ ಮಲಗಲೂ ಎಂದು
ಮುಂದಿನ ಸೀಟಿನಲ್ಲಿಯೇ ಕುಳಿತದ್ದು
ಗೊತ್ತಲ್ಲ ನಿಮಗೂ
ಹಿಂದಿನ ಸೀಟು ಎಬ್ಬೆಬ್ಬಿಸಿ ಒಗೆಯುವದೆಂದು

ನಮ್ಮ ಡ್ರೈವರು ತುಂಬಾ ತಲೆಹಿಡುಕ
Private Luxury bus ಬೇರೆ ನೋಡಿ
ಚಹಾದ ಅಂಗಡಿ ಬೀಡಿ ಅಂಗಡಿ
ಗಬ್ಬೆದ್ದಿರುವ ನೊಣಗಳ ಡಾಬ
ಕಳ್ಳಿನ ಹಳಸುನಾತಿನ ಹೊಟೇಲುಗಳ ಈ ಹೆದ್ದಾರಿಗುಂಟೆಲ್ಲ
ಇವನಿಗೆ ಜಿಗರಿದೋಸ್ತಗಳ ಸರಮಾಲೆ
ಇವನಿಗೆ ಅವರೋ, ಅವರಿಗಾಗಿ ಇವನೋ ಎಂಬಂತೆ.
ಓಡುವ ಬಸ್ಸು ಹಾರ್ನು ತಕ್ಷಣದ ಬ್ರೇಕು
ಅಬ್ಬಬ್ಬಾ ಬಸ್ಸಪ್ಪಾ, ಏ ಬಸಪ್ಪಾ
ಕಿರುಚಾಡುವಂತಾಗುತ್ತಿತ್ತು ಮನಸ್ಸು.

ಟೊಂಗೆ ಟೊಂಗೆಗಳ ಮೇಲಿನ ಮಂಗಗಳಂತೆ
ಡ್ರೈವರ್ರನ ಅಕ್ಕಪಕ್ಕದಲ್ಲೆಲ್ಲಾ Extra ಸೀಟುಗಳು
ಬಸಪ್ಪನ ಜೇಬು ತುಂಬುವ ಅರ್ಜೆಂಟದವರು.

ರಣರಣ ಮಧ್ಯಾಹ್ನ ಬಿಸಿಲು
ಎಳೆನೀರು ಬಾಳೆಹಣ್ಣುಗಳಿದ್ದರೂ
ಪ್ರಯಾಣಿಕರಿಗೆಲ್ಲ ಬೇಕು Fancy cococolaಗಳು
ಚಳಿಹತ್ತಿ ನಡಗುವ ವಿದೇಶಿಮೂಲದವರಂತೆ
ಇಳಿದಾಗೊಮ್ಮೆ ಎಳೆಯಲು ಬ್ರಾಂಡೇಡ್ ಸಿಗರೇಟುಗಳು.
ಹೆದ್ದಾರಿಗುಂಟ ಓಡುವ ಎದುರಾಗುವ
ಚಿತ್ರವಿಚಿತ್ರ ಹೆಸರಿನ ಲಾರಿ ಬಸ್ಸು ಟೆಂಪೋಗಳು
ಬೆಟ್ಟದಹಾವು, ತಾಯಿಯಮಗ, ನಿಮ್ಮಪ್ಪನ ಮಗ,
ಅಣ್ಣಯ್ಯನ ತಮ್ಮ, ಹೆದ್ದಾರಿಬಕ ಹೀಗೆ –
ಯಕ್ಷಕನ್ನಿಕೆಯರ ಸಿನೇಮದವುಗಳ
ಮಿನಿ ಮಿಡಿ ಚಿತ್ರಗಳು ನೋಡುತ್ತ ಓದುತ್ತ
ಡ್ರೈವರ್ ಹೇಗೆ ಓಡಿಸುತ್ತಾನಪ್ಪ ಬಸ್ಸು
ಆಕ್ಸಿಡೆಂಟ್ ಮಾಡದೆಯೆ?
ಹೆದರಿ ಹಿಂದೊರಗಿ ಕಣ್ಣುಮುಚ್ಚಿದ್ದೆ-

ಸುರುವಾಯಿತು ನೋಡಿ
ಒಂದು ಜೊಂಪು ನಿದ್ದೆ ಮಾಡಿ ಎದ್ದವರ ಹರಟೆ
ಮದುವೆ ದಿಬ್ಬಣದವರಿರಬೇಕೇನೊ
ಅವರಪ್ಪನ ಮನೆಯ ಬಸ್ಸು ಎನ್ನುವಂತೆ
ಹುಡುಗ ಹುಡುಗಿ ಬಂಗಾರು ಅಂತಸ್ತುಗಳನ್ನೆಲ್ಲ
ಇಲ್ಲಿ ಕಿತಾಪತಿಸುತ್ತ
ಸಂಬಂಧಿಕರನ್ನೆಲ್ಲಾ ಮಾತಿನಲ್ಲಿ ಥಳಿಸುತ್ತಾ ಹಗುರಾಗುತ್ತಿದ್ದರು.

ನನಗೋ ಕಣ್ಣು ಮುಚ್ಚದೆಯೋ ತೆರಯದೆಯೋ
ಒಳಗೊಳಗೇ ಕಿರಿಕಿರಿಯ ಒದ್ದಾಟ.
ಬರುತ್ತಿದೆ ನನ್ನೂರು ಹತ್ತಿರ ಹತ್ತಿರ
ಸಂಜೆಯಸೂರ್ಯ ಗಲ್ಲಕ್ಕೆ ಮುದ್ದಿಟ್ಟು ಎಬ್ಬಿಸಿದ್ದ
ಹಕ್ಕಿಪಕ್ಕಿ ದನಕರುಗಳೆಲ್ಲಾ ಗೂಡು ಸೇರಲು
ಓಡುತ್ತಿರುವಾಗ ಗಕ್ಕನೆ ಬ್ರೇಕ್ ಹಾಕಿದ ಬಸ್ಸಪ್ಪಾ
ಕ್ಷಣಾರ್ಧದಲ್ಲಿಯೇ ಇಳಿದು
ಅಡ್ಡಬಂದ ಚಕ್ಕಡಿಯವನೆದೆ ಎಳೆದು ಥಳಿಸಿ
ನೂರೆಂಟು ಹಲ್ಕಾ ಬೈಗುಳಗಳನ್ನೆಲ್ಲಾ ಸುರಿದು
ಎತ್ತೂಗಳೂ ನಡುಗುವಂತೆ ಮಾಡಿದ್ದ ನಮ್ಮ ಡ್ರೈವರ್ರು
ಹೆದ್ದಾರಿಗುಂಟ ಎರಡೂ ಕಡೆಗೂ
ಅರ್ಧ ಗಂಟೆ ರಸ್ತೆ ಬ್ಲಾಕು.
ಪ್ರಯಾಣಿಕರೆಲ್ಲ ಎರಡೂ ಕಡೆಗೂ ಬಾಲಬಡಿದು
ಡ್ರೈವರ್ರನ್ನ ತಂದು ಕೂರಿಸಿ
ನಡೆಯಪ್ಪ ಬೇಗ ಊರು ಸೇರೋಣ ಬೆಳಕಿನಲ್ಲಿಯೇ
ಅಂದರೂ
ಮುಂದಿನ ಊರಿನ ಹೊಟೆಲ್ ಮುಂದೆ ನಿಲ್ಲಿಸಿಯೇಬಿಟ್ಟ.

Coffee ಸಮಯ ಪ್ರಯಾಣಿಕರ ಪರಿಚಯ ವಿಳಾಸ
ಮಾತುಕತೆಗಳಲಿ ಸಂಬಂಧಿಗಳು, ಸ್ನೇಹಿತರು, ಆಗೇಬಿಡುವದೆ!!
“ಮುಂದಿನ ಸಲ ಬೆಂಗಳೂರಿಗೆ ಬಂದರೆ ನಿಮ್ಮಲ್ಲೇ ವಸ್ತಿ
ಇನ್ನೇನೂ ತೊಂದರೆ ಇಲ್ಲ ಬಿಡಿ”
ನನ್ನ ಪರಮೀಷನ್ ಇಲ್ಲದೆ ಬುಕ್ ಮಾಡಿಕೊಂಡೇ ಬಿಟ್ಟರು.

ಅಬ್ಬಬ್ಬಾ ಯಾಕಾದರೂ ಹಗಲಿನಲ್ಲಿಯೇ ಹೊರಟೆನಪ್ಪ ಊರಿಗೆ
ಸುದೈವಕೆ ಗಾಡಿ ಪಂಕ್ಚರ್ ಆಗದೇ
ಊರು ಸೇರಿದಾಗ ಅಗಿತ್ತು ರಾತ್ರಿ ಹತ್ತು.

“ಈಗೀಗ ತೀರ್ಮಾನಿಸಿದ್ದೇನೆ
ಹೆದ್ದಾರಿಗುಂಟ ರಾತ್ರಿ
ದರೋಡೆಯಾಗಲಿ ಕೊಲೆಸುಲಿಗೆ
ಅಕ್ಸಿಡೆಂಟೇ ಆಗಲಿ
ಮತ್ತಷ್ಟು ಊಟ ಮಾಡಿ ಬೇಕಿದ್ದರೆ
ಒಂದು ನಿದ್ದೆ ಗುಳಿಗೆಯೂ ನುಂಗಿ
ನೀರು ಕುಡಿದು ಆರಾಮವಾಗಿ
ಸೀಟಿಗೊರಗಿ ಗಪ್‌ಚುಪ್‌ ನಿದ್ದೆ ಮಾಡುತ್ತ
“ರಾತ್ರಿ ಪ್ರಯಾಣ ಮಾಡಲು”!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರದೀ ಮಗು?
Next post ಸಂಸಾರಿ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys